Ramoji Rao: ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ, ರಾಮೋಜಿ ರಾವ್ ನಿಧನ, ಗಣ್ಯರಿಂದ ಸಂತಾಪ

ಹೈದೆರಾಬಾದ್: ರಾಮೋಜಿ ಫಿಲ್ಮ್ ಸಿಟಿ (Ramoji Film City) ಸಂಸ್ಥಾಪಕ ರಾಮೋಜಿ ರಾವ್ (Ramoji Rao) ಅವರು ಇಂದು ಶನಿವಾರ ಬೆಳಗಿನ ಜಾವ 3:45ಕ್ಕೆ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಇಂದು ಹೈದರಾಬಾದ್‌ ನ ಸ್ಟಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: NCB Recruitment: ಸಬ್ ಇನ್ಸೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಮಾಧ್ಯಮ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಅವರು, ತಮ್ಮ ಜೀವನಕಾಲದಲ್ಲಿ ಅನೇಕ ಸಾಧನೆಗಳನ್ನು ಮಾಡಿದರು. ರಾಮೋಜಿ ಫಿಲ್ಮ್ ಸಿಟಿ, ತಮ್ಮ ಕನಸುಗಳನ್ನು ಸಾಕಾರಗೊಳಿಸಿದ ಒಂದು ಮಹತ್ವಾಕಾಂಕ್ಷೆಯ ಯೋಜನೆ, ಇದು ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿಗಳಲ್ಲಿ ಒಂದು. ರಾಮೋಜಿ ರಾವ್ ಅವರ ನಿಧನವು ಮಾಧ್ಯಮ ಮತ್ತು ಚಲನಚಿತ್ರ ಲೋಕಕ್ಕೆ ದೊಡ್ಡ ಹೊಡೆತವನ್ನೇ ಆಗಿದೆ. ರಾಮೋಜಿ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಪ್ರಾರ್ಥನೆ ಹಾಗೂ ಅವರ ಕುಟುಂಬದವರಿಗೆ ಸೆಲೆಬ್ರಿಟಿಗಳು ಇವರ ಸಂತಾಪ ಸೂಚಿಸಿದ್ದಾರೆ. ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಅಪಾರವಾದ ಉತ್ಸುಕರಾಗಿದ್ದರು. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರ ಬುದ್ಧಿವಂತಿಕೆಯಿಂದ ಪ್ರಯೋಜನ ಪಡೆಯಲು ಹಲವಾರು ಅವಕಾಶಗಳನ್ನು ಪಡೆದಿರುವುದು ನನ್ನ ಅದೃಷ್ಟ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ. ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *