ಹೈದರಾಬಾದ್: ಎಸ್. ಎಸ್. ರಾಜಮೌಳಿ ಅವರ ಜೀವನ ಮತ್ತು ಕಾರ್ಯಚಟುವಟಿಕೆಗಳ ಕುರಿತಾದ ಸಾಕ್ಷ್ಯಚಿತ್ರ ‘ಮಾಡರ್ನ್ ಮಾಸ್ಟರ್ಸ್’( Modern Masters ) ಆಗಸ್ಟ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಾಕ್ಷ್ಯಚಿತ್ರವನ್ನು ರಾಘವ್ ಖನ್ನಾ ನಿರ್ದೇಶಿಸಿದ್ದು, ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಹಾಗೂ ಫಿಲ್ಮ್ ಕಂಪಾನಿಯನ್ ಸ್ಟುಡಿಯೋ ನಿರ್ಮಾಣ ಮಾಡಿದೆ.
ಇದನ್ನೂ ಓದಿ: Union Budget 2024: 2024-25ರ ಕೇಂದ್ರ ಬಜೆಟ್ ನಲ್ಲಿ ಯಾವುದು ಕಡಿಮೆ, ಯಾವುದು ಹೆಚ್ಚು?
ಈ ಡಾಕ್ಯುಮೆಂಟರಿಯ 2 ನಿಮಿಷದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಭಾರಿ ಕುತೂಹಲ ಮೂಡಿಸಿದೆ. ಜೇಮ್ಸ್ ಕೆಮರೂನ್, ಜೋ ರುಸ್ಸೋ, ಕರಣ್ ಜೋಹರ್, ಪ್ರಭಾಸ್, ರಾಮಚರಣ್, ಜೂನಿಯರ್ ಎನ್‌ಟಿಆರ್, ಎಂ.ಎಂ. ಕೀರವಾಣಿ ಸೇರಿದಂತೆ ಅನೇಕ ಗಣ್ಯರು ರಾಜಮೌಳಿ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ರಾಜಮೌಳಿ ಅವರು ‘ಬಾಹುಬಲಿ’, ‘ಆರ್‌ಆರ್‌ಆರ್’, ‘ಮಗಧೀರ’, ‘ಈಗಾ’ ಸೇರಿದಂತೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕರಾಗಿದ್ದಾರೆ. ‘ಮಾಡರ್ನ್ ಮಾಸ್ಟರ್ಸ್’ ಸಾಕ್ಷ್ಯಚಿತ್ರವು ರಾಜಮೌಳಿ ಅವರ ಬಗ್ಗೆ ಇನ್ನೂ ಹೊರಜಗತ್ತಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ತೆರೆದಿಡಲಿದೆ.