ಚೆನ್ನೈ: ಅಂಚೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಗ್ರಾಹಕನಿಗೆ 50 ಪೈಸೆಯನ್ನು ಹಿಂದಿರುಗಿಸದ ಪ್ರಕರಣದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹10,000 ಪರಿಹಾರವನ್ನು ಪಾವತಿಸುವಂತೆ ಭಾರತೀಯ ಅಂಚೆ ಇಲಾಖೆಗೆ ಸೂಚಿಸಿದೆ. ಈ ಪ್ರಕರಣದಲ್ಲಿ, 2023ರ ಡಿಸೆಂಬರ್ 13ರಂದು ಚೆನ್ನೈನ ಪೊಜಿಚಲೂರ್ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ ಲೇಟರ್ ಖರೀದಿಸಿದ ಮನಶಾ ಅವರಿಗೆ ₹29.50 ರಶೀದಿಯೊಂದಿಗೆ ₹30 ಪಾವತಿಸಲಾಗಿತ್ತು. ಯುಪಿಐ ಮೂಲಕ ಪಾವತಿಸಲು ಮನಶಾ ಅವರು ಸಿದ್ಧರಿದ್ದರು, ಆದರೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಸಿಬ್ಬಂದಿ ಅದನ್ನುContinue Reading

ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಅವರು ತಮ್ಮ ಪತ್ನಿ ಆರತಿಗೆ ವಿಚ್ಛೇದನ ಘೋಷಣೆ ಮಾಡಿದ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಆರತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿರುವ ಆರತಿ, ವಿಚ್ಛೇದನದ ಕುರಿತು ತಾವು ಪೂರ್ಣವಾಗಿ ತಿಳಿಯದೆ ಘೋಷಣೆ ಮಾಡಿರುವುದು ಆಘಾತಕಾರಿ ಎಂದು ಹೇಳಿದ್ದಾರೆ. ಅವರು ತಮ್ಮ ಪತಿಯೊಂದಿಗೆ ನೇರವಾಗಿ ಸಂಭಾಷಣೆ ಮಾಡಲು ಪ್ರಯತ್ನಿಸಿದರೂ, ಅದುContinue Reading

ಚೆನ್ನೈ: ನಟ ಮತ್ತು ರಾಜಕಾರಣಿ ವಿಜಯ್‌ ಅವರು ಹೊಸ ರಾಜಕೀಯ ಪಕ್ಷ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸ್ಥಾಪಿಸಿರುವುದು ರಾಜ್ಯದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅವರು (Vijay TVK flag) ಇತ್ತೀಚೆಗೆ ತಮ್ಮ ಪಕ್ಷದ ಧ್ವಜವನ್ನು ಅನಾವರಣ ಮಾಡಿದ್ದು, ಇದರ ಬಗ್ಗೆ ತಮಿಳುನಾಡು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಜಯ್‌ ಅವರ ಧ್ವಜದಲ್ಲಿ ಆನೆಗಳ ಚಿಹ್ನೆ ಬಳಸಿರುವುದನ್ನು ಪ್ರಶ್ನಿಸಿ, ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ಆನಂದ್‌ ಚುನಾವಣಾContinue Reading

ಚೆನ್ನೈ: ತಮಿಳುನಾಡಿನ “ತಮಿಳಗ ವೆಟ್ರಿ ಕಳಗಂ” ಪಕ್ಷದ ನಾಯಕ ಮತ್ತು ನಟ ವಿಜಯ್ ನೀಟ್‌ ಪರೀಕ್ಷೆಯಿಂದ (NEET Exam) ತಮಿಳುನಾಡಿಗೆ ವಿನಾಯಿತಿ ನೀಡಬೇಕು. ವಿಜಯ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದಾಗ, ‘ದೇಶದ ಜನರು ‘ನೀಟ್’ ಪರೀಕ್ಷೆ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಈ ಪರೀಕ್ಷೆ ವಿದ್ಯಾರ್ಥಿಗಳ ಮೇಲೆ ಅನವಶ್ಯಕ ಒತ್ತಡವನ್ನು ಸೃಷ್ಟಿಸುತ್ತಿದ್ದು, ಹಾಗಾಗಿ ಈ ಪರೀಕ್ಷೆ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ‘ನೀಟ್’ ಪರೀಕ್ಷೆಯಿಂದ ವಿನಾಯಿತಿ ಪಡೆಯುವುದುContinue Reading